ಚಿತ್ರ :ರಾಜ ನನ್ನ ರಾಜ
ಸಂಗೀತ:ಜಿ.ಕೆ.ವೆಂಕಟೇಶ್
ಸಾಹಿತ್ಯ:ಚಿ.ಉದಯ ಶಂಕರ್
ನಿರ್ದೇಶನ:ಎ.ವಿ.ಶೇಷಗಿರಿರಾವ್
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ಹಗಲಲಿ ತಿರುಗಿ ಬಳಲಿದೆ,ಇರುಳಲಿ ಬಯಸಿ ಕೊರಗಿದೆ,
ದಿನವು ನಿನ್ನ ನಾ ಕಾಣದೆ .......
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ
ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ,ಕರಗುತ ಧರೆಗೆ ಇಳಿವುದು,ಹರಿಯುತ ಕಡಲ ಬೇರೆವುದು,
ನಮ್ಮೀ ಬಾಳಿನಾ ಬಗೆ ಇದು....
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ