ಗುರುವಾರ, ಜನವರಿ 19, 2012

'ಪ್ರೀತಿಯ ಲೋಕ'

'ಪ್ರೀತಿಯ ಲೋಕ' ಇದೊಂದು ಭಾವಗೀತೆ , ಈ ಗೀತೆಯು ನನ್ನ ಬ್ಲಾಗ್ ಟೈಟಲ್ ಗೆ ಹತ್ತಿರವಾಗಿರುವುದರಿಂದ, ಹಾಗೂ ನನ್ನ ಜೀವನದ ಕೆಲವೊಂದು ಅನುಭವಕ್ಕೂ ಮತ್ತು ಮನಸ್ಸಿಗೂ ಕೂಡ ಇದು ಹತ್ತಿರವಾಗಿರುವುದರಿಂದ ಹಾಗೂ
ಇದನ್ನು ಓದುವವರಿಗೂ (ಪ್ರೀತಿಸಿ ಮೋಸಹೋದ ಎಲ್ಲಾ ಓದುಗರ ಮನಸ್ಸು, ಭಾವನೆಗಳಿಗೂ) ಇದರ ಸಾರಾಂಶ ಹತ್ತಿರವಾಗಿರುವುದರಿಂದ ಈ ಹಾಡನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಸುಮ್ನೆ ಒಂದ್ಸಲ ಹಾಗೆ ಓದಿ ನಿಮ್ಮ ಅನಿಸಿಕೆ ತಿಳ್ಸಿ.

ಪ್ರೀತಿಯ ಲೋಕ ತೋರಿಸಿ ದೂರಾದೆ ನೀನೇತಕೆ..? ೨
ಹೊಸಬಾಳ ಆಸೆ ಮೂಡಿಸಿ ದೂರಾದೆ ನೀನೇತಕೆ..? ೨

ಬಾಯಾರಿದ ಈ ಮಣ್ಣಿಗೆ ಚೈತನ್ಯ ಜಲವಾದೆ ನೀ..೨
ನವಿರೇಳಿಸಿ ನಗೆ ಚಿಮ್ಮಿಸಿ ದೂರಾದೆ ನೀನೇತಕೆ.? ೨
ಪ್ರೀತಿಯ ಲೋಕ ತೋರಿಸಿ ದೂರಾದೆ ನೀನೇತಕೆ..? ೨
ಹೊಸಬಾಳ ಆಸೆ ಮೂಡಿಸಿ ದೂರಾದೆ ನೀನೇತಕೆ..? ೨

ಆ ಚಂದ್ರತಾರೆಗಳಾಚೆಗೆ ಕರೆದೊಯ್ವ ಮಾತಾಡುತಾ..? ೨
ತೊರೆದೆನ್ನ ಈ ಒಣಬಾಳಲಿ ದೂರಾದೆ ನೀನೇತಕೇ..? ೨
ಪ್ರೀತಿಯ ಲೋಕ ತೋರಿಸಿ ದೂರಾದೆ ನೀನೇತಕೆ..? ೨
ಹೊಸಬಾಳ ಆಸೆ ಮೂಡಿಸಿ ದೂರಾದೆ ನೀನೇತಕೆ..? ೨

ಸೆಳಮಿಂಚಿನ ತೆರದಂತೆನೀ ಬಂದಾಗ ಬೆಳಕಾಗಿದೆ..೨
ನೀನಿಲ್ಲದೇ ಬರಿಕತ್ತಲೇ ದೂರಾದೆ ನೀನೇತಕೆ..? ೨
ಪ್ರೀತಿಯ ಲೋಕ ತೋರಿಸಿ ದೂರಾದೆ ನೀನೇತಕೆ..? ೨
ಹೊಸಬಾಳ ಆಸೆ ಮೂಡಿಸಿ ದೂರಾದೆ ನೀನೇತಕೆ..? ೨


Collection

ಬುಧವಾರ, ಜನವರಿ 18, 2012

ಹೃದಯದ ಒಡತಿ..

ಚೆಲುವಲ್ಲೆ ಚೆಲುವಾಗಿ,
ನೀನನ್ನ ಪ್ರೇಮಿಯಾಗಿ,
ಕನಸಲ್ಲು ಬಂದೋಗಿ,
ಮನದಲ್ಲೇ ಮನೆಮಾಡಿ,
ನನ್ನ ಪುಟ್ಟ ಹೃದಯದ ಒಡತಿಯಾಗಿ,
ಕಣ್ಣಿಗೆ ಕಾಣದೆ ಮರೆಯಾಗಿ
ಹೋದೆಯಲ್ಲೆ ಓ ನನ್ನ ನಲ್ಲೆ...!

ಹುಡುಗರೇ ಎಚ್ಚರ...!


ಎಚ್ಚರ ಹುಡುಗರೇ ಎಚ್ಚರ...
ಬಳುಕುವ ಬಾಲೆಯರ ಮೈಮಾಟಕ್ಕೆ ಮರುಳಾಗಿ,
ಕಣ್ಣೋಟಕ್ಕೆ ಸೆರೆಯಾಗಿ ಹಾಳಾಗದಿರಿ ಜಾರಿಹೋಗಿ... ಎಚ್ಚರ ಹುಡುಗರೇ...

ವೈಯ್ಯಾರಕ್ಕೆ ಬೆರಗಾಗಿ, ಮೌನದಿ ಕೊರಗಿ ಸೊರಗಿ,
ಎಟುಕದ ಆಕಾಶಕ್ಕೆ ಹಾರೀರಿ ನೀವು ತರಗೆಲೆಯಾಗಿ... ಎಚ್ಚರ ಹುಡುಗರೇ...

ಮೆಚ್ಚಿ ಅವಳ ನೋಟ, ಹುಚ್ಚರಾಗಿ ನೀವು ಅಲೆದು,
ಕೊಚ್ಚಿ ಹೋಗಿ ಪ್ರೇಮದಲೆಯಲ್ಲಿ, ಮುಚ್ಚಿ ಹೋದೀರಿ ಮರಳುಗಾಡಿನಲ್ಲಿ... ಎಚ್ಚರ ಹುಡುಗರೇ ಎಚ್ಚರ...

ಮಂಗಳವಾರ, ಜನವರಿ 17, 2012

ಅಗಸ್ಟ್ ೧೩

ಒಂದು ಹುಡುಗಿಗೆ ಗಿಫ್ಟ್ ಕೊಡಿ,
ಸ್ಮೈ ಲ್ ಕೊಡಿ,
ಹಾರ್ಟ್ ಕೊಡಿ,
ಪ್ರೀತಿ ಕೊಡಿ,
ಮನಸು ಕೊಡಿ,
ಚಾಕೊಲೇಟ್ ಕೊಡಿ,
ಆದರೆ....
ಆಗಸ್ಟ್ ೧೩ ಕ್ಕೆ ಕೈ ಕೊಡಬೇಡಿ..!
ಯಾಕಂದ್ರೆ ?
ರಾಖಿ ಕಟ್ಟುತ್ತಾರೆ.? !!!!!!!!

ಕಲ್ಲು ಮನಸ್ಸು

ನಿಮ್ಮ ಸ್ನೇಹಿತರ ಮನಸ್ಸು ಕಲ್ಲು ಅಂತ ನಿಮಗನ್ನಿಸಿದರೆ,
ದಯವಿಟ್ಟು ಅವರಿಂದ ದೂರ ಹೋಗಲು ಪ್ರಯತ್ನಿಸಬೇಡಿ,,,
ಏಕೆಂದರೆ ಆ ಕಲ್ಲಿನ ಮೇಲೆ ಬರೆದ ನಿಮ್ಮ ನೆನಪು....
ಎಂದೆಂದಿಗೂ ಅಳಿಸಲು ಸಾಧ್ಯವಿಲ್ಲ......!!!!

ಪಾಳು ಬಂಗಲೆ


ಚಿತ್ರ ಕೃಪೆಃ- ಅಂತರ್ಜಾಲ

ನಲ್ಲೆ....
ನನ್ನ ಹೄದಯ ಭವ್ಯ ಬಂಗಲೆಯಂತಿತ್ತು ನೀ ಅಂದು ನೆಲೆಸಿದಾಗ, ನೀ ಅಂದು ನೆಲೆಸಿದಾಗ
ನೀ ಶಾಶ್ವತವೆಂದು ನಂಬಿ ಬೀಗದೆಸಳು ನಿನಗೆ ಕೊಟ್ಟೆ,,
ಬಾಡಿಗೆಯವರು ಬಂದುಹೋಗುವಂತೆ ಅರೆ ಗಳಿಗೆಗೆ ಬೀಗ ಜಡಿದು ಹೋದೆ,
ಎಸಳು ನಿನ್ನಲ್ಲಿಯೇ ಇದೆ ॥ನಲ್ಲೆ॥
ಬೀಗ ಹೊಡೆಯಲಾರೆ ನಿನ್ನ ಹುಡುಕಲಾರೆ,,
ಖಾಲಿ ಇದೆಯೇ ?..... ಎನ್ನುವರು......
ಮನೆಯ ಬೀಗ ತೆಗೆದು ತೋರಿಸಲು ಎಸಳು ನಿನ್ನಲ್ಲಿಯೇ ಇದೆ ॥ನಲ್ಲೆ॥
ತಿರುಗಿ ಯಾರು ನೋಡರು ಒಳಗೆ ಯಾರಿಹರೆಂದು ?
ಮನಸಲ್ಲಿ ಒಳಗೊಳಗೆ ನೀ ಇದ್ದೆ ಎಂದು ತೋರಿಸಲು ಎಸಳಿಲ್ಲ, ಅದು ನಿನ್ನಲ್ಲಿಯೇ ಇದೆ ನಲ್ಲೆ....
ಕಿಟಕಿಯಿಂದ ನೋಡಿದರೆ ಒಳಗೆ ಧೂಳು ತುಂಬಿದೆ...
ಜೇಡರ ಬಲೆಯು ನೇಯ್ದು ಪಾಳು ಬಂಗಲೆಯಾಗಿದೆ
ತೆಗೆದು ತೋರಿಸಲು ಎಸಳಿಲ್ಲ ಅದು ನಿನ್ನಲ್ಲಿಯೇ ಇದೆ..
ನಲ್ಲೆ ನನ್ನ ಹೄದಯ ಪಾಳು ಬಂಗಲೆಯಾದಂತಾಯ್ತು...
ನೀನಿಲ್ಲದಿರುವಾಗ, ನೀ ಮರೆತು ಹೋಗುವಾಗ, ನಲ್ಲೆ ನೀ ಮರೆತು ಹೋಗುವಾಗ.....

ಇಂತಿಃ- ಮೋಹನ್