ಮಂಗಳವಾರ, ಜನವರಿ 17, 2012

ಪಾಳು ಬಂಗಲೆ


ಚಿತ್ರ ಕೃಪೆಃ- ಅಂತರ್ಜಾಲ

ನಲ್ಲೆ....
ನನ್ನ ಹೄದಯ ಭವ್ಯ ಬಂಗಲೆಯಂತಿತ್ತು ನೀ ಅಂದು ನೆಲೆಸಿದಾಗ, ನೀ ಅಂದು ನೆಲೆಸಿದಾಗ
ನೀ ಶಾಶ್ವತವೆಂದು ನಂಬಿ ಬೀಗದೆಸಳು ನಿನಗೆ ಕೊಟ್ಟೆ,,
ಬಾಡಿಗೆಯವರು ಬಂದುಹೋಗುವಂತೆ ಅರೆ ಗಳಿಗೆಗೆ ಬೀಗ ಜಡಿದು ಹೋದೆ,
ಎಸಳು ನಿನ್ನಲ್ಲಿಯೇ ಇದೆ ॥ನಲ್ಲೆ॥
ಬೀಗ ಹೊಡೆಯಲಾರೆ ನಿನ್ನ ಹುಡುಕಲಾರೆ,,
ಖಾಲಿ ಇದೆಯೇ ?..... ಎನ್ನುವರು......
ಮನೆಯ ಬೀಗ ತೆಗೆದು ತೋರಿಸಲು ಎಸಳು ನಿನ್ನಲ್ಲಿಯೇ ಇದೆ ॥ನಲ್ಲೆ॥
ತಿರುಗಿ ಯಾರು ನೋಡರು ಒಳಗೆ ಯಾರಿಹರೆಂದು ?
ಮನಸಲ್ಲಿ ಒಳಗೊಳಗೆ ನೀ ಇದ್ದೆ ಎಂದು ತೋರಿಸಲು ಎಸಳಿಲ್ಲ, ಅದು ನಿನ್ನಲ್ಲಿಯೇ ಇದೆ ನಲ್ಲೆ....
ಕಿಟಕಿಯಿಂದ ನೋಡಿದರೆ ಒಳಗೆ ಧೂಳು ತುಂಬಿದೆ...
ಜೇಡರ ಬಲೆಯು ನೇಯ್ದು ಪಾಳು ಬಂಗಲೆಯಾಗಿದೆ
ತೆಗೆದು ತೋರಿಸಲು ಎಸಳಿಲ್ಲ ಅದು ನಿನ್ನಲ್ಲಿಯೇ ಇದೆ..
ನಲ್ಲೆ ನನ್ನ ಹೄದಯ ಪಾಳು ಬಂಗಲೆಯಾದಂತಾಯ್ತು...
ನೀನಿಲ್ಲದಿರುವಾಗ, ನೀ ಮರೆತು ಹೋಗುವಾಗ, ನಲ್ಲೆ ನೀ ಮರೆತು ಹೋಗುವಾಗ.....

ಇಂತಿಃ- ಮೋಹನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ