ಸೋಮವಾರ, ಜನವರಿ 21, 2013

ಆಕಾಶವೇ ಬೀಳಲಿ ಮೇಲೆ .....



ಚಿತ್ರ: ನ್ಯಾಯವೇ ದೇವರು
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಪಿ .ಬಿ ಎಸ್
ನಿರ್ದೇಶನ:ಸಿದ್ದ್ದಲಿಂಗಯ್ಯ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಹೆದರಿಕೆಯ ನೋಟವೇಕೆ,ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ,ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೇಡೆವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು

ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು

ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ

ಎಲ್ಲಿರುವೆ,ಮನವ ಕಾಡುವ ರೂಪಸಿಯೇ...

ಚಿತ್ರ: ಬಯಲುದಾರಿ
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್ ನಾಗೇಂದ್ರ
ನಿರ್ದೇಶನ:ದೊರೈ -ಭಗವಾನ್
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 


ಎಲ್ಲಿರುವೆ,ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ, ಮನವ ಕಾಡುವ ರೂಪಸಿಯೇ

ತೇಲುವ ಈ ಮೂಡದ ಮೇಲೆ, ನೀನಿಂತ ಹಾಗಿದೆ
ನಸುನಗುತ, ನಲಿನಲಿದು, ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ
ತನುವೆಲ್ಲ,ಹಗುರಾಗಿ,ತೇಲಾಡುವಂತಿದೆ,ಹಾಡುವಂತಿದೆ

ಚೆಲುವೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ,ನೀನು ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ,ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ, ಭಾಗ್ಯನನ್ನದಾಗಿದೆ
ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ,ಭವ್ಯವಾಗಿದೆ

ನಲ್ಲೇ,ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ನೀ ಮೀಟಿದ ನೆನಪೆಲ್ಲವು....

ಚಿತ್ರ: ನೀ ಬರೆದ ಕಾದಂಬರಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಜಯಾನಂದ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಿರ್ದೇಶನ:ದ್ವಾರಕೀಶ್


ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನಾ ಬಹು ಜನ್ಮದಾ ಕಥೆ ಎಂದು ಮನ ಹೇಳಿದೆ
ಈ ಬಂಧನಾ ಬಹು ಜನ್ಮದಾ ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೇ ಚಲುವೇ ನನ್ನ ಮರೆತು ನಗುವೇ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಚಿತ್ರ: ಮನ ಮೆಚ್ಚಿದ ಹುಡುಗಿ
ಸಂಗೀತ:ಉಪೇಂದ್ರಕುಮಾರ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಎಂ.ಎಸ್.ರಾಜಶೇಕರ್
ಗಾಯಕರು:S P ಬಾಲಸುಬ್ರಮಣ್ಯಂ


ಉಸಿರೇ .......ಆಹಾ ...ಆಹಾ ....ಆಹಾ .....
ಉಸಿರೇ .......ಆಹಾ ...ಆಹಾ ....ಆಹಾ .....
ಒಡಲನು ಬಿಟ್ಟು ಹೋದೆಯಾ .......ಆಹಾ ...ಆಹಾ ....ಆಹಾ .....
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ.......
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ.......
ನನ್ನ ಬಾಳಿನ ಜ್ಯೋತಿಯಾಗಿ ,ನನ್ನ ಪ್ರೇಮದ ಮೂರ್ತಿಯಾಗಿ,
ನನ್ನ ಪ್ರಾಣದ ಪ್ರಾಣವಾಗಿ ಎಲ್ಲಿ ಹೋದೆ ದೂರವಾಗಿ

ಚೆಲುವೇ......ಒಲವೇ...... ಚೆಲುವೇ......ಒಲವೇ......
ಉಸಿರೇ.......................

ಹಗಲೋ ಇರುಳೋ ಅರಿಯದೆ ಹೋದೆ
ಚಿಂತೆಯ ಭಾರ ತಾಳದೆ ನೂಂದೆ
ಹಗಲೋ ಇರುಳೋ ಅರಿಯದೆ ಹೋದೆ
ಚಿಂತೆಯ ಭಾರ ತಾಳದೆ ನೂಂದೆ
ಕಣ್ತುಂಬ ನೋಡದೇನೆ,ಸವಿಮಾತು ಹಾಡದೇನೆ
ನೋವೆಲ್ಲಾ ಮರೆಯದೇನೆ ಈ ಜೀವ ಉಳಿವುದೇನೆ
ಚೆಲುವೇ......ಒಲವೇ...... ಚೆಲುವೇ......ಒಲವೇ......
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......

ಮುಗಿಲೇ ಕರಗಿ ಅಳುತಿರುವಾಗ
ಹೃದಯವು ನೊಂದು ಕೂಗಿರುವಾಗ
ಮುಗಿಲೇ ಕರಗಿ ಅಳುತಿರುವಾಗ
ಹೃದಯವು ನೊಂದು ಕೂಗಿರುವಾಗ
ನನ್ನ ಮಾತು ಕೇಳದೇನೆ,ನನ್ನ ನೆನಪು ಬಾರದೇನೆ,
ನಮ್ಮ ಪ್ರೇಮ ಮರೆತೆಯನೆ ,ನನ್ನ ಸ್ನೇಹ ಬೇಡವೇನೆ
ಚೆಲುವೇ......ಒಲವೇ...... ಚೆಲುವೇ......ಒಲವೇ......

ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......

ನಲಿವಾ ಗುಲಾಬಿ ಹೂವೆ....

ಚಿತ್ರ: ಆಟೋರಾಜ
ಸಂಗೀತ:ಇಳಯರಾಜ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ವಿಜಯ್
ಗಾಯಕರು:ಎಸ್.ಪಿ.ಬಾಲ ಸುಬ್ರಮಣ್ಯಮ್

ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...

ಸುಳಿದೇ ತಂಗಾಳಿಯಂತೆ,ನುಡಿದೇ ಸಂಗೀತದಂತೆ,
ಸುಳಿದೇ ತಂಗಾಳಿಯಂತೆ,ನುಡಿದೇ ಸಂಗೀತದಂತೆ,
ಒಲವಿನ ಬಲೆಯಲಿ ಸೆಳೆಯುತ ಕುಣಿದೆ.ಸೊಗಸಾಗಿ,ಹಿತವಾಗಿ
ಮನವಾ ನೀ ಸೇರಲೆಂದೇ,ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ .... ಇಂದೇಕೆ ದೂರಾದೆ,ಹೀಗೇಕೆ ಮರೆಯಾದೆ

ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...

ಸುಮವೇ ನೀ ಬಾಡದಂತೆ,ಬಿಸಿಲಾ ನೀ ನೋಡದಂತೆ,
ಸುಮವೇ ನೀ ಬಾಡದಂತೆ,ಬಿಸಿಲಾ ನೀ ನೋಡದಂತೆ,
ನೆರಳಲಿ,ಸುಖದಲಿ,ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ,ಇರಲಿ ನನಗೆಲ್ಲ ಬೇಗೇ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ,ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ,ನನಗಾಗಿ ನಿನಗಾಗಿ,ನನಗಾಗಿ

ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ...

ಚಿತ್ರ: ಜಿಮ್ಮಿಗಲ್ಲು
ಸಂಗೀತ:ವಿಜಯ ಭಾಸ್ಕರ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ರವಿ
ಗಾಯಕರು:ವಿಷ್ಣುವರ್ಧನ್

ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು

ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು,ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು,ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ.......
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ,,ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ

ನಮ್ಮೂರ ಮಂದಾರ ಹೂವೆ......

ಚಿತ್ರ: ಆಲೆಮನೆ
ಸಂಗೀತ: L ವೈಧ್ಯನಾಥನ್
ಸಾಹಿತ್ಯ:ದೊಡ್ಡ ರಂಗೇಗೌಡ
ನಿರ್ದೇಶನ:ಮೋಹನಕುಮಾರ್


ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ ...............

ಕಣ್ಣಲ್ಲೇ ಕರೆದು ,ಹೊಂಗನಸಾ ತೆರೆದು,ಸಂಗಾತಿ ಸಂಪ್ರೀತಿ ಸೆಳೆದೆ.
ಅನುರಾಗ ಹೊಳೆದು,ಅನುಬಂದ ಬೆಳೆದು,ಸಮ್ಮೋಹ ಸಂಬಂದ ಮಿಡಿದೆ,
ಮೂಡಿದಾ..ಪ್ರೇಮದಾ...ಸೊಗಸಾದ ಕಾರಂಜಿ ಮಿಡಿದೆ
ಸೊಗಸಾದ ಕಾರಂಜಿ ಮಿಡಿದೆ

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ ...............

ಒಡಲಾಳ ಮೊರೆದು,ಒಡನಾಟ ಮೆರೆದು,ಒಡನಾಡಿ ಬಾಂಧವ್ಯ ಕಂಡೆ,
ಋತುಮಾನ ಮೀರಿ,ಹೊಸಗಾನ ತೋರಿ ,ಹಿತವಾದ ಮಾದುರ್ಯ ಮಿಂದೆ,
ತೀರದ...ಮೋಹದ.....ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ,

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು,ಬರಿದಾದ ಮನದಲ್ಲಿ ಮಿನುಗು

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಚಿತ್ರ: ಹೊಂಬಿಸಿಲು
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಗೀತಪ್ರಿಯ
ನಿರ್ದೇಶನ:B S ಸೋಮಶೇಕರ್
ಗಾಯಕರು:ಎಸ್.ಪಿ.ಬಾಲ ಸುಬ್ರಮಣ್ಯಮ್


ಹೇಹೇಹೇ........ಓಹೋಹೋಹೋ........ಆಹಾ ಆಹಾಹಾಹಾ.........
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಕೂಡಿ ನಲಿವಾ ಆಸೆ ಮನದೀ ಕಾದಿರೆ
ಹಿತವು ಎಲ್ಲಿ ನಾವು ಬೇರೆ ಆದರೆ ,ಹಿತವು ಎಲ್ಲಿ ನಾವು ಬೇರೆ ಆದರೆ

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ಆಹಾ ...ಹಾ...ಹಾ....ಲ ಲ ಲಾ .......ಹೊಂ ..ಹೊಂ ...ಹೊಂ......

ಹೂವಿಂದ ಬರೆವ ಕಥೆಯಾ,

ಚಿತ್ರ: ಹಾವಿನ ಹೆಡೆ
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ಸೋಮಶೇಕರ್
ಗಾಯಕರು:ಡಾ.ರಾಜಕುಮಾರ್


ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
sorry i am very sorry
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು

ತಿಳಿಯಾದ ನೀರಿನಲ್ಲಿ ,ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ,ಅಪಸ್ವರವೂ ಮೂಡಿದಂತೆ
ನಾ ಆ ದಿನಾ ಆಡಿದ ನುಡಿ ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,ನನ್ನಾಣೆ ನಂಬು ನೀ ನನ್ನನು
sorry i am very ಸಾರೀ
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು

ನಿನ್ನಂತೆ ನೊಂದೆ ನಾನು ,ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ ಅಲೆದಾಡಿದೆ... ಹುಡುಕಾಡಿದೆ ...
ವಿಷಾದವನ್ನು ಬಿಡು ಬಿಡು,ಸಂತೋಷವನ್ನು ಕೊಡು ಕೊಡು

ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾ.........

ಬಿಸಿಲಾದರೇನು ......ಮಳೆಯಾದರೇನು ....,

ಚಿತ್ರ: ಬೆಂಕಿಯ ಬಲೆ
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ದೊರೈ -ಭಗವಾನ್
ಗಾಯಕರು: S P ಬಾಲಸುಬ್ರಮಣ್ಯಂ

ಬಿಸಿಲಾದರೇನು ......ಮಳೆಯಾದರೇನು ....,
ಬಿಸಿಲಾದರೇನು ......ಮಳೆಯಾದರೇನು ........
ಜೊತೆಯಾಗಿ ಇಂದು ನಾನಿಲ್ಲವೇನು....
ನೀ ನನ್ನ ಜೀವಾ ಎಂದಿಗೂ ......
ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು .....

ಹೂವು ಹಾವಾದರೇನು,ಹಾಲು ವಿಷವಾದರೇನು ,
ಹೂವು ಹಾವಾದರೇನು,ಹಾಲು ವಿಷವಾದರೇನು ,
ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ ಅರಳದೇನು.
ಬುವಿಯೇ ಬಾಯ್ ಬಿಟ್ಟರೇನು,ಸಿಡಿಲೇ ಎದುರಾದರೇನು..
ನನ್ನಾಣೆ ನಲ್ಲೇ ನಾ ನಿನ್ನ ಬಿಡೆನು,ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ ,ಮಿಡಿಯದೆ ,ಇನ್ನು ನಗಲಾರೆ ಏನು ...

ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು .....

ಸೆಳೆವ ಸುಳಿಯಾದರೇನು,ಬೆಂಕಿಯ ಬಲೆಯಾದರೇನು,
ಸೆಳೆವ ಸುಳಿಯಾದರೇನು,ಬೆಂಕಿಯ ಬಲೆಯಾದರೇನು,
ಈ ಬಾಳು ಎಂದು ಹೋರಾಟ ತಾನೆ ,ಬಿಡು ಇನ್ನು ಚಿಂತೆಯನ್ನು
ಯಾರೇನು ಅಂದರೇನು ,ಊರೇ ಎದುರಾದರೇನು ,
ಕೊನೆತನಕ ನಾನು ಹೋರಾಡಿ ಗೆಲುವೇ,ನಿನ್ನನ್ನು ನಾನು ಬಿಡೆನು
ಕೊರಗದೆ ಮರುಗದೆ ನಲ್ಲೇ ನಗಲಾರೆಯೇನು .....

ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು ...

ನಿನಗಾಗಿ ಓಡೋಡಿ ಬಂದೇ,

ಚಿತ್ರ: ಸನಾದಿ ಅಪ್ಪಣ್ಣ
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ವಿಕ್ರಂ ಶ್ರೀನಿವಾಸ್
ಗಾಯಕರು: ಡಾ.ರಾಜಕುಮಾರ್


ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ, ಮರೆಯಾಗಿ ಹೋದೆ, ನೀನು
ನಿನಗಾಗಿ ಓಡೋಡಿ ಬಂದೇ...

ತಣ್ಣನೇ ಗಾಳಿ ಬೀಸಿದ ಹಾಗೆ ,ಬಾಳಲಿ ಬಂದೆ ಸಂತಸ ತಂದೆ ,
ಕಣ್ಣಿಗೇ ಮಿಂಚು ಕಾಣುವ ಹಾಗೆ ಬಾಳಿನ ಬಾಳಲಿ ಬೆಳಕನು ತಂದೆ,
ಸ್ನೇಹದೀ ಸೇರಿ ....ಮೋಹವ ತೋರಿ .....ಸನಿಹಕೆ ಸಾರಿ ...ಮನವನು ಸೇರಿ .....
ಏಕೇ.......ನೀ ಮರೆಯಾದೆ ......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ ,ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ, ಮರೆಯಾಗಿ ಹೋದೆ, ನೀನು
ನಿನಗಾಗಿ ಓಡೋಡಿ ಬಂದೇ...

ಬಿಸಿಲಿಗೆ ಹೂವು ಬಾಡುವ ಹಾಗೆ,ಕಾಣದಿ ನೊಂದೆ ವಿರಹದಿ ಬೆಂದೆ ,
ಮುಳ್ಳಿನ ಬಲೆಯ ಹಿಡಿಯಂತಾಗಿ,ಅಳುತಿದೆ ಮನವು ನಗುತಿದೆ ತನುವು ,
ತೀರದ ನೋವಾ ....ತಾಳದು ಜೀವಾ.....ಕಾಣದೆ ನೀನು ,ಉಳಿಯೇನು ನಾನು .....'
ಏಕೇ .....ನೀ ದೂರಾದೆ ............ದೂರಾದೆ .......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ, ಮರೆಯಾಗಿ ಹೋದೆ, ನೀನು
ನಿನಗಾಗಿ ಓಡೋಡಿ ಬಂದೇ
ಚಿತ್ರ:ಮಾನಸಸರೋವರ
ಸಂಗೀತ:ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು: S P ಬಾಲಸುಬ್ರಮಣ್ಯಂ


ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ ,ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ಚಿನ್ನಾದ ಚೂರಿ ಚೆಂದಾವ ತೋರಿ,ಚಿನ್ನಾದ ಚೂರಿ ಚೆಂದಾವ ತೋರಿ,
ಬೆನ್ನಲ್ಲೇ ತೂರಿತಲ್ಲೋ........, ಬೆನ್ನಲ್ಲೇ ತೂರಿತಲ್ಲೋ,......
ನೆತ್ತಾರ ಹೀರಿತಲ್ಲೋ,ನಿನ್ನಾ ನೆತ್ತಾರ ಹೀರಿತಲ್ಲೋ ......

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ಬೀಸೋಗಾಳಿ ಬಿರುಗಾಳಿಯಾಗಿ,ಬೀಸೋಗಾಳಿ ಬಿರುಗಾಳಿಯಾಗಿ,
ಬೆಂಕಿಯ ಮಳೆ ತಂತಲ್ಲೋ......,ಬೆಂಕಿಯ ಮಳೆ ತಂತಲ್ಲೋ.......,
ಬೆಂಕೀಲಿ ಬೆಂದೆಯಲ್ಲೋ,ಉರಿ ಬೆಂಕೀಲಿ ಬೆಂದೆಯಲ್ಲೋ,

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....
ಹೂವಾಗಿ ಅರಳಿ ಹಾವಾಗಿ ಕೆರಳಿ,ಹೂವಾಗಿ ಅರಳಿ ಹಾವಾಗಿ ಕೆರಳಿ,
ಪ್ರಾಣಾವ ಹಿಂಡಿತಲ್ಲೋ ...... ಪ್ರಾಣಾವ ಹಿಂಡಿತಲ್ಲೋ ......
ಎದೆಯಲ್ಲಾ ಸಿಡಿಯಿತಲ್ಲೋ........,ನಿನ್ನಾ ನಗುವೆಲ್ಲಾ ಹುಡುಗಿತಲ್ಲೋ......

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ ,ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ತಂಗಾಳಿಯಲ್ಲಿ ನಾನು ತೇಲಿ ಬಂದೆ,

ಚಿತ್ರ:ಜನ್ಮ ಜನ್ಮದಾ ಅನುಬಂಧ 
ಸಂಗೀತ:ಇಳೆಯರಾಜ 

ಸಾಹಿತ್ಯ:ಉದಯಶಂಕರ್ 
ನಿರ್ದೇಶನ:ದಿ  ಶಂಕರನಾಗ್
ಗಾಯಕರು: S ಜಾನಕೀ



ಓಹೋ......ಹೋ ............. ಓಹೋ......ಹೋ .............
ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ .............

ನಿನ್ನಾ ಎಲ್ಲೂ ಕಾಣದೆ ಹೋಗಿ ,ನನ್ನಾ ಜೀವ ಕೂಗಿ ಕೂಗಿ ,
ಏಕಾಂಗಿಯಾಗಿ ನಾನು ನೊಂದು ಹೋದೆ ,
ಹೀಗೇಕೆ ದೂರ ಮಾಡಿದೆ......ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು ಓಹೋ......ಹೋ .............


ಏತಕೆ ಹೀಗೆ ಅಲೆಯುತಲಿರುವೆ ,
ಯಾರನು ಹೀಗೆ ಹುಡುಕುತಲಿರುವೆ ,
ಕಣ್ಣಲ್ಲಿ ನನ್ನಾ ಬಿಂಬ ಇಲ್ಲವೇನು ,
ನೀ ಕಾಣೆ ಏನು ನನ್ನನು ....ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು

ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ ............. 

ನೂರೊಂದು ನೆನಪು......

ಚಿತ್ರ: ಬಂಧನ 
ಸಂಗೀತ:ಎಂ.ರಂಗರಾವ್ 
ಸಾಹಿತ್ಯ:ಆರ್.ಏನ್.ಜಯಗೋಪಾಲ್ 
ನಿರ್ದೇಶನ:ರಾಜೇಂದ್ರಸಿಂಗ್ ಬಾಬು 
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,


ನೂರೊಂದು ನೆನಪು......,ಎದೆಯಾಳದಿಂದ..........
ಹಾಡಾಗಿ ಬಂತು........ಆನಂದದಿಂದ.......  
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ, 
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ... 

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ  ಈ ಹಾಡಿನಿಂದಾ

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ವೇದಾಂತಿ ಹೇಳಿದನು....

ಚಿತ್ರ: ಮಾನಸ ಸರೋವರ 
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ 
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು:ಪಿ ಬಿ ಶ್ರೀನಿವಾಸ್ 


ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ,ಸ್ವರ್ಗವನೇ ಗೆಲ್ಲುವೆ,

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

 ವೇದಾಂತಿ ಹೇಳಿದನು,ಈ ಬದುಕು ಶೂನ್ಯ ಶೂನ್ಯ,
ಕವಿ ನಿಂತು ಸಾರಿದನು,ಓ...ಇದು ಅಲ್ಲ ಶೂನ್ಯ,
ಜನ್ಮ ಜನ್ಮದಿ ಸವಿದೆ,ನಾನೆಷ್ಟು ಧನ್ಯ ನಾನೆಷ್ಟು ಧನ್ಯ...

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು, 

ಒಲವಿನ ಪ್ರಿಯಲತೆ ಅವಳದೇ ಚಿಂತೆ.......

ಚಿತ್ರ: ಕುಲ ವಧು  
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರೀ 
ನಿರ್ದೇಶನ: ಟಿ.ವಿ ಸಿಂಗ್ ಟಾಕುರ್
ಗಾಯಕರು:ಪಿ ಬಿ ಶ್ರೀನಿವಾಸ್ 


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಮರೆಯದಂತ ಪ್ರೇಮರಾಶಿ
ಹೃದಯದಶಾ ರೂ......ಪಸಿ......
ಮನದೊಳಾಡೋ ಆ ವಿಲಾಸಿ
ಒಲಿದು ಬಂದ ಪ್ರೇಯಸಿ..........

ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಪ್ರಣಯ ರಾಗದ ಜೀವ ಗೆಳತಿ
ಬಾಳ ಬೆಳಗೋ ಶ್ರೀಮತಿ....,
ಸನ್ನೆ ಮಾತಿನ ಸರಸಗಾತಿ
ಕನ್ನಡಾಂಬೆಯ ಕುಲಸತಿ...........


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......

ಇದು ಯಾರು ಬರೆದ ಕಥೆಯೋ.....


ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ವಿ.ಸೋಮಶೇಕರ್ 
ಗಾಯಕರು:ಡಾ !!ರಾಜಕುಮಾರ್ 

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,


ಇದು ಯಾರು ಬರೆದ ಕಥೆಯೋ,......

ಕಾಣದಿಹ ಕೈಯೊಂದು  ಸೂತ್ರ ಹಿಡಿದಿದೆ 
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ 
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ. 


ಇದು ಯಾರು ಬರೆದ ಕಥೆಯೋ,......

ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ  ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ   

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,

ಬಾನಿಗೊಂದು ಎಲ್ಲೇ ಎಲ್ಲಿದೆ....


ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಫಿರೋಜ್ ದಿನ್
ನಿರ್ದೇಶನ:ವಿ.ಸೋಮಶೇಕರ್
ಗಾಯಕರು:ಡಾ !!ರಾಜಕುಮಾರ್ 

ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ......
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು 
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.


ಬಾನಿಗೊಂದು ಎಲ್ಲೇ ಎಲ್ಲಿದೆ,......

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ 
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ 
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ 


ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...

ಕಥೆ ಮುಗುಯಿತೆ.........


ಚಿತ್ರ: ಸಿಪಾಯಿ ರಾಮು 
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಆರ್ ಏನ್ ಜಯಗೋಪಾಲ್ 
ನಿರ್ದೇಶನ:ಸ್ವಾಮಿ Y R
ಗಾಯಕರು:ಪಿ.ಬಿ ಶ್ರೀನಿವಾಸ್ 


ಕಥೆ ಮುಗುಯಿತೆ.........,ಆರಂಭದಾ ಮುನ್ನಾ ..........
ಲತೆ ಬಾಡಿ ಹೋಯಿತೇ ........ಹೂವಾಗುವಾ  ಮುನ್ನಾ.......

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ
ಮಡದಿ ಮಕ್ಕಳು,ಸ್ನೇಹಿತರನ್ನು,ಮಣ್ಣಿನ ವಶ ಮಾಡಿ,
ನಡೆದಿಹೆ ಇಂದು ಅಂಧನ ರೀತಿ,
ಶೋಕದೆ.......... ಏನೋ ನಿನ್ನ ಗುರಿ 

ಎಲ್ಲಿಗೆ ಪಯಣಾ...........

ಸೋಲು ಗೆಲುವು,ಸಾವು ನೋವು,
ಜೀವನದುಯ್ಯಾಲೆ .................
ಸಾಯುವ ಮುನ್ನ ಜನಿಸಿದ ಮಣ್ಣಾ,
ದರುಶನ ನೀ ಪಡೆದು 
ತಾಯಿಯ ಮಡಿಲಾ,ಧುಳಲಿ ಬೆರೆತು,
ಶುನ್ಯದೇ ...........ಮುಗಿಸು ನಿನ್ನ ಕಥೆ   

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ

ಚಿತ್ರ: ನಾಂದಿ
ಸಂಗೀತ: ವಿಜಯ ಭಾಸ್ಕರ್ 
ಸಾಹಿತ್ಯ:ಆರ್.ಏನ್  ಜಯಗೋಪಾಲ್ 
ನಿರ್ದೇಶನ:ಏನ್.ಲಕ್ಶ್ಮಿನಾರಾಯಣ 
ಗಾಯಕರು:ಪಿ.ಬಿ ಶ್ರೀನಿವಾಸ್ 


ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ 
ಹಾಡೊಂದ ಹಾಡುವೆ ನೀ ಕೇಳು ಮಗುವೇ,

ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ 
ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ 
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲಾ ,
ಸಿರಿಯಾಗಿ,ನಿಧಿಯಾಗಿ,ನೀ ಬರುವೆಯಲ್ಲಾ 

ಹಾಡೊಂದ ಹಾಡುವೆ ನೀ ಕೇಳು ಮಗುವೇ,

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ,
ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ, 
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಇವಳಾಸೆ ಆಕಾಂಷೆ ನಿನಾದೆಯಲ್ಲ  

ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ

ಆಡಿಸಿ ನೋಡು ಬೀಳಿಸಿ ನೋಡು.....


ಚಿತ್ರ: ಕಸ್ತೂರಿ ನಿವಾಸ 
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ದೊರೈ ರಾಜ್
ಗಾಯಕರು:ಪಿ.ಬಿ ಶ್ರೀನಿವಾಸ್ 

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು, 
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,