ಶನಿವಾರ, ಫೆಬ್ರವರಿ 16, 2013

ಬಿದ್ದಿಯಬ್ಬೇ ಮುದುಕಿ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ
ಕೆಟ್ಟಗಂಟಿ ಚೌಡೇರು ಬಂದು
ಉಟ್ಟದ್ದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

http://api.cld.me/253A30162b0o2t2o0d3y/download/Biddiyabbe.mp3

ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ಕೇಳೆ
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲೂ ಹೋಗದ ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ
ಎಲ್ಲರಂಥವನಲ್ಲ ನನ್ನ ಗಂಡ

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ
ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತಲ್ಲಿ ಮೂವರ
ಮಕ್ಕಳೈವರ ಮಮತೆ ಕೆಡಿಸಿದನೇ
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ನನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೆ
ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವ ದುರಿತವನು ಹರಿಸಿದನೇ
ಶಿಶುನಾಳ ಧೀಶ

ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ
http://api.cld.me/1p1c2V1U0N3Q3O2C3f1D/download/08%20Ellaranthavanalla.mp3

ಮೌನ ತಬ್ಬಿತು ನೆಲವ

ಸಾಹಿತ್ಯ – ಗೋಪಾಲ ಕೃಷ್ಣ ಅಡಿಗ
ಸಂಗೀತ / ಗಾಯನ – ಸಿ ಅಶ್ವಥ್


ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ

ಸಾಹಿತ್ಯ – ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ


ಕೃಷ್ಣ ….. ಕೃಷ್ಣ …. ಕೃಷ್ಣ …. ಕೃಷ್ಣ ……….
ಕೃಷ್ಣಾ …….

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ … (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ…

ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದಾ ರಾತ್ರಿ ಬೀಳು (೨)
ನೀ ಸಿಗದೇ ಉರಿ ಉರಿ ಕಳೆದೆ ಇರುಳ… (೨)
ಮಾತೆಲ್ಲ ಬಿಗಿದಿದೆ ದುಃಖ ಕೊರಳ…..
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ … (೨)

ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು… (೨)
ಯಾರು ಅರಿವರು ಹೇಳು ನನ್ನ ನೋವ …(೨)
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ.. (೨)

ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ (೨)
ಜನುಮ ಜನುಮದಾ ರಾಗ ನನ್ನ ಪ್ರೀತಿ .. ಕೃಷ್ಣ .. ಕೃಷ್ಣ … ಕೃಷ್ಣಾ …
ಕೃಷ್ಣ …
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ … (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ… ಕೃಷ್ಣ .. ಕೃಷ್ಣ .. ಕೃಷ್ಣಾ ..

ಜೋಗದ ಸಿರಿ ಬೆಳಕಿನಲ್ಲಿ

ಹಾಡು: ನಿತ್ಯೋತ್ಸವ
ರಚನೆ: ಕೆ. ಎಸ್. ನಿಸ್ಸಾರ್ ಅಹಮದ್
ಗಾಯನ:

ನಿತ್ಯೋತ್ಸವ
- ಕೆ. ಎಸ್. ನಿಸಾರ್ ಅಹಮದ್

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ...

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ

ನೀ ಹಿಂಗ ನೋಡಬ್ಯಾಡ ನನ್ನ

ನೀ ಹಿಂಗ ನೋಡಬ್ಯಾಡ ನನ್ನ
ರಚನೆ: ದ. ರಾ. ಬೇಂದ್ರೆ
ಗಾಯನ: ಸಿ. ಅಶ್ವಥ್


ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ,
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,
ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ
ತಂಬಳ ಹಾಕದ ತುಂಬಾ ಕೆಂಪು ಗಿಣಿ ಗದಕ ಹಣ್ಣಿನ ಹಂಗ,
ಇದ್ದಂತ ತುಟಿಯ ಬಣ್ಣೆತ್ತ ಹಾರಿತು, ಯಾವ ಘಳಿಗೆ ಹಿಂಗ?
ಈ ಗತ್ತಗಲ್ಲ ಹನಿ ಕಣ್ಣು ಕಂಡು, ಮಾರಿಗೆ ಮಾರಿಯ ರೀತಿ,
ಸವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ,
ನೀ ಹಿಂಗ ನೋಡಬ್ಯಾಡ ನನ್ನ

ಇಬ್ಬನಿ ತೊಳೆದರು ಹಾಲು ಮೆಟ್ಟಿದ ಕವಲಿ ಕಾಂತಿಯ ಹಣ್ಣು
ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು,
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ,
ಹುಣ್ಣಿಮಿ ಚಂದಿರನ ಹೆಣ ಬಂತೋ ಮುಗಿಲಾಗ ತೆಲತಾ ಹಗಲ,
ನಿನ್ನ ಕಣ್ಣಿನಾಗ ಕಾಲೂರಿ ಮಳೆಯೂ, ನಡ ನಡಕ ಹುಚ್ಚು ನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ,
ಅತ್ತರೆ ಅತ್ತು ಬಿಡು ಹೊನಲು ಬರಲಿ, ನಾಕ್ಯಾಕ ಮರಸತಿ ದುಃಖ,
ಎದೆ ಬಿರಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ,

ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,
ತಿರುಗಿ ನಾ ಹೆಂಗ ನೋಡಲೇ ನಿನ್ನ?

ದೀಪವು ನಿನ್ನದೇ ಗಾಳಿಯು ನಿನ್ನದೇ

ದೀಪವು ನಿನ್ನದೇ ಗಾಳಿಯು ನಿನ್ನದೇ
ಚಿತ್ರ: ಮೈಸೂರು ಮಲ್ಲಿಗೆ
ರಚನೆ: ಡಾ. ಕೆ.ಎಸ್. ನರಸಿಂಹಸ್ವಾಮಿ
ಗಾಯನ: ಸಿ. ಅಶ್ವಥ್


ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ

ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ
ಕಡಲು ನಿನ್ನದೆ, ಹಡುಗು ನಿನ್ನದೆ, ಮುಳುಗದಿರಲಿ ಬದುಕು

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ,
ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಗಂಧದ ಗುಡಿ

ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ 
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ 
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ 
ನಾವಾಡುವ ನುಡಿಯೇ ಕನ್ನಡ ನುಡಿ 
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ 
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ 

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು 
ಆಹಹಾ ಓ ಹೊ ಹೋ..ಆ‌ಆ ಓ ಹೋ 
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ 
ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು 
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ 

ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ 
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ 
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ.. ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ 

ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ 
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ ಆ.. ಆಹ.. ಆಹ ಆ‌ಅ. ಆಹ.. ಹಾಹ.. ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು ಆಹಹಹಾ ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..

ನೂರು ಜನ್ಮಕು ನೂರಾರು ಜನ್ಮಕು

ಚಿತ್ರ : ಅಮೇರಿಕಾ ! ಅಮೇರಿಕಾ !!
ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ್
ಗೀತ ರಚನೆ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋ ಮೂರ್ತಿ
ಗಾಯನ : ರಾಜೇಶ್ ಕೃಷ್ಣನ್


ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು |೨|

ಬಾಳೆಂದರೆ ಪ್ರಣಯಾನು ಭಾವ ಕವಿತೆ ಆತ್ಮಾನು ಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓ. ಓ .ಓ .....
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ || ನೂರು ಜನ್ಮಕು ||

ಬಾ ಸಂಪಿಗೆ ಸವಿ ಭಾವ ಲಹರಿ ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲಾ ಓ. ಓ .ಓ .....
ಲೋಕದ ಸುಖವೆಲ್ಲಾ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ || ನೂರು ಜನ್ಮಕು ||


ಮಂಗಳವಾರ, ಫೆಬ್ರವರಿ 5, 2013

ನಿನ್ನಾ ರೂಪು....

ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಮಿಂದಾಗಾ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗಾ...//ನಿನ್ನಾ ರೂಪು //


ಮನಸಿನಾ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದಾ ಕುಲುಮೆಯಾಗೆ ನೂರು ಬಯಕೇ ಸಿಡಿದೈತೆ
ನಿನ್ನಾ ಕಾಣುವ ಬಾವ ಬೆಳೆದು ನನಾ ಕನಸು ಕಡೆದೈತೆ..//ನಿನ್ನಾ ರೂಪು //


ತೆರೆಯದಾ ಬಯಕೆ ಬಾನೂ ದೂರಾ ದೂರಾ ಸರಿದೈತೆ
ಹರೆಯದಾ ಹಂಬಲ ಗಂಗೇ ಬಾಗೀ ಬಳುಕೀ ಹರೆದೈತೆ
ನಿನ್ನಾ ಸ್ನೇಹಕೆ ಬಾಳು ನಲಿದು ಆಸೆ ಗಂಧಾ ಹರಡೈತೆ...//ನಿನ್ನಾ ರೂಪು //


ಮರೆಯದಾ ಮೋಹ ಉಕ್ಕೀ ತೇಲೀ ತೇಲೀ ಮೊರೆದೈತೆ
ಇಂಗದಾ ದಾಹ ಬೇಗೇ ಕಾದೂ ಕಾದೂ ಕರೆದೈತೆ
ನಿನ್ನಾ ಸೇರುವ ರಾಗರಂಗಿಗೆ ನನ್ನಾ ಮನಸೂ ತೆರೆದೈತೆ.. //ನಿನ್ನಾ ರೂಪು //


ಪರಸಂಗದ ಗೆಂಡೆತಿಮ್ಮ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ...
ಹಕ್ಕಿ ಹಾಡ್ಯಾವೇ...
ಬೀರ್‍ಯಾವೇ, ಚೆಲುವಾ ಬೀರ್‍ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್, ಹಾಡಿ ಕುಣಿಯೋಣ ತಮ್ಮಾ

ಬೇಲಿ ಮ್ಯಾಗೆ ಬಣ್ಣ ಬಣ್ಣದ
ಹೂವು ಅರಳ್ಯಾವೆ
ಆ ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆ
ಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
||ಕುಂತರೆ ಸೆಳೆವ, ಸಂತಸ ತರುವ||
ಹೊಂಗೆ ತೊಂಗೆ ತೂಗಿ ತೂಗಿ
ಗಾಳಿ ಬೀಸ್ಯಾವೇ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ...
ಹಕ್ಕಿ ಹಾಡ್ಯಾವೇ...
ಮರಗಿಡ ಕೂಗ್ಯಾವೇ...
ಚಿಲಿಪಿಲಿ ಹಕ್ಕಿ ಹಾಡ್ಯಾವೇ...

ಭೂಮಿ ಮೇಲೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ
||ಭಾವಾ ಬಿರಿದು, ಹತ್ತಿರ ಕರೆದು ||
ಮಾವು ಬೇವು ತಾಳೆ ತೆಂಗು
ಲಾಲಿ ಹಾಡ್ಯಾವೆ

||ತೇರಾ ಏರಿ...||

ಲಾಲಿಹಾಡು

ಓಹೋ ಉಷೇ..............
ಓಹೋ ಉಷೇ.............
ಕಣ್ಣಿಗೇ..........
ಕಾಣಿಸೇ.............

ಹದಿನೇಳೂ ಚೈತ್ರಗಳಾ..
ತೇರಿನಲೀ ಬ೦ದವಳಾ
ಒಲವಿನ ಹೂವ ಹಾಸಿ ಹೇಳುವೆ ನಾ
ಸುಸ್ವಾಗತ ಸ್ವಾಗತ || ಓಹೋ ಉಷೇ ||

ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿಯೋ ಬ೦ಧುಗಳು ಯಾರಾದರೂ
ನಿನ್ನ ಜೊತೆಯಿರೇ ಭಾಗ್ಯವ೦ತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತಿರಲಿ
ಈ ಮನಸಿನಾ ಮೇಲೆ
ನಿನ್ನ ಗುರುತಿದೇ
ಸುಖವಾಗಿರು..........

ನಿನ್ನಿ೦ದಾ ಹೊಸ ಬೆಳಕೂ
ನಿನ್ನಿ೦ದಾ ಹೊಸ ಬದುಕೂ
ಮರೆಯದಾ ನೂರು ನೆನಪು ತರುವ
ಮನಸಿಗೆ ವ೦ದನೆ ವ೦ದನೆ

ಸಿಹಿ ಇರಲಿ ಕಹಿ ಇರಲಿ
ಈ ಜಗದಲಿ
ನಿನ್ನ ಪಾಲಿಗೆ
ಸಿಹಿ ತು೦ಬಲಿ
ಬದುಕುಗಳು ತಿರುವುಗಳು
ಹೇಗೆ ಇರಲಿ
ನೆನಪು ಉಳಿಯಲಿ
ಕನಸು ಅರಳಲಿ

ಏಳೂ ಬೀಳಿನ ಬಾಳಿನಲಿ
ಏಳಿಗೆಯೊ೦ದೇ ನಿನಗಿರಲಿ
ಪ್ರತಿಜನ್ಮಕೂ ನಿನ್ನ
ಹೆಸರುಳಿಯಲೀ
ಹಾಯಾಗಿರು ಎ೦ದೂ
ಸುಖವಾಗಿರು
ಈ ಪಲ್ಲವಿ ನೀನಾಗಿರು ......

ಕಸ್ತೂರಿ ನಿವಾಸ

ಕಸ್ತೂರಿ ನಿವಾಸ

ಎಲ್ಲೇ ಇರು ಹೇಗೇ ಇರು
ಎಂದೆಂದು ಮನದಲ್ಲಿ ನೀ ತುಂಬಿರು
/ಎಲ್ಲೇ/

ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ಆ ರೂಪವ
ಬೆಳಕಾಗಿ ಬಂದ ಆ ದೀಪವ
/ಎಲ್ಲೇ/

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ
ನೀ ನೀಡು ಸಾಕು ನಗೆಯೊಂದನು
/ಎಲ್ಲೇ/


ಅದ್ದೂರಿ...!

ಮುಸ್ಸಂಜೆ ವೇಳೆಲಿ, ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...
ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ.
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ....

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...

ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ,
ಕಳೆದು ಹೋಗೋ ಮುನ್ನ ಕೈ ಸೇರಬಾರದೆ...
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...
ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...

ಎದೆ ಮೇಲೆ ಮಾಡಿದ್ದ ಆ ಹಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ..
ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ.....
ದೂರಾದರೆ ನೋವಾಗದೇ.... ದೂರಾಗಲು ಭಯವಾಗಿದೆ.. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...
ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...